Wednesday, 14 October 2015

Praise & Criticize ಸ್ತುತಿ-ನಿಂದೆ

Praise & Criticize ಸ್ತುತಿ-ನಿಂದೆ

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆ ತೆರೆಗಳಿಗಂಜಿದಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟದ ಬಳಿಕ ಸ್ತುತಿನಿಂದೆಗಳು ಬಂದಡೆ,
ಮನದಲ್ಲಿ ಕೋಪವತಾಳದೆ ಸಮಾಧಾನಿಯಾಗಿರಬೇಕು.
-ಮ. ಅ. ವ.  ೧೩೪

ನಿಂದೆ ಎರಗಿದಾಗ ಮಹಾಜ್ಞಾನಿ ಅಕ್ಕಮಹಾದೇವಿ ಹೇಗೆ ಅದನ್ನು ಸ್ವೀಕರಿಸಿದರು ಎಂಬುದನ್ನು ಉತ್ತರಾರ್ಧದಲ್ಲಿ ನೋಡಿ, ವಿಪರೀತ ಪ್ರಸಂಗಗಳು ಎದುರಾದಾಗ ಸಾಧಕರು ತಮ್ಮ ಉನ್ನತ ಸ್ಥಿತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು; ಅಥವಾ ಅಂಥ ವಿಪರೀತ ಪ್ರಸಂಗಗಳನ್ನು ಯಾವ ರೀತಿ ಎದುರಿಸಿ ಸಿದ್ಧಪುರುಷರಾಗಬೇಕು ಎಂಬುದನ್ನು ಸಮಾಲೋಚಿಸುವಾ.

ಲೋಕದಲ್ಲಿ ಹುಟ್ಟಿ ಬಂದ ನಂತರ ಒಳ್ಳೆಯವರಿಂದ ಸ್ತುತಿ, ದುಷ್ಟರಿಂದ ನಿಂದೆ ಬರುವುದು ಅನಿವಾರ್ಯವೇ ಆಗಿದೆ. ಪ್ರಪಂಚದಲ್ಲಿ ಒಳ್ಳಿತು (Good) ಮತ್ತು ಅನಿಷ್ಟ (Evil) ವೆಂಬ ತತ್ವಗಳು ಯಾವಾಗಲೂ ಇರತಕ್ಕವುಗಳೇ. ಸ್ತುತಿ ಬಂದಾಗ ಹಿಗ್ಗಿ ಅಹಂಕಾರದಿಂದ ಬೀಗದೆ, ನಿಂದೆ ಬಂದಾಗ ಕುಗ್ಗಿ ಹತಾಶಗೊಳ್ಳದೆ, ಮನದಲ್ಲಿ ಯಾವ ಪ್ರಕಾರದ ಕೋಪವನ್ನೂ ಮಾಡಿಕೊಳ್ಳದೆ ಸಮಾಧಾನಿಯಾಗಿ ಚಿತ್ತ ಸಮತೆಯನ್ನು ಕಾಯ್ದು ಕೊಂಡು ಹೋಗಬೇಕೆಂದು ಅಕ್ಕ ಈ ವಚನದಲ್ಲಿ ಚಿತ್ತಸಮತೆಯ ಮಹಾನ್ ಸಂದೇಶವನ್ನು ಹೇಳಿದ್ದಾರೆ.

ಕೋಪವೆಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಕೋಪವು ನಾಲ್ಕು ಪ್ರಕಾರವಾಗಿ ಇರುತ್ತದೆ. ತಾಮಸ, ರಾಜಸ, ಸಾತ್ವಿಕ ಮತ್ತು ಮಹಾತ್ಮರ ಕೋಪ ಎಂಬುದಾಗಿ.
ತಾಮಸ ಕೋಪ: ಚರ್ಮದ ಮೇಲೆ ಬರೆ ಎಳೆದಂಥಾ ಕೋಪ. ದನಗಳ ಚರ್ಮದ ಮೇಲೆ ಎಳೆದ ಬರೆ ಹೇಗೆ ನಾಶವಾಗುವುದಿಲ್ಲವೋ, ಶಾಶ್ವತವಾಗಿ ಉಳಿಯುವುದೋ ಅದರಂತೆ ತಾಮಸ ಜೀವಿಗಳು ಯಾರದೋ ವಿಷಯವಾಗಿ ಎಂದೋ ಕೋಪ ತಾಳಿದವರು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರೊಡನೆ ಕಚ್ವಾಡುವರು, ಶತ್ರುವಿನ ಸರ್ವನಾಶಕ್ಕೆContinuedಸುವರು.
ರಾಜಸ ಕೋಪ: ಕಲ್ಲಿನ ಮೇಲೆ ಗೆರೆ ಎಳೆದಂಥಾ ಕೋಪ, ಇದು ರಾಜಸ ಜನರ ಕೋಪ. ಕಾಲವು ಗತಿಸಿದ ನಂತರ ಕಲ್ಲಿನ ಗೆರೆ ಅಳುಕಿದಂತೆ ರಾಜಸ ವ್ಯಕ್ತಿಗಳಲ್ಲಿರುವ ಕೋಪ ಕಡಿಮೆಯಾಗಬಹುದು.
ಸಾತ್ವಿಕ ಕೋಪ: ಉಸುಕಿನ ಮೇಲೆ ಗೆರೆ ಎಳೆದಂತಹ ಕೋಪ, ಗಾಳಿ ಬಿಟ್ಟಾಗ ಉಸುಕಿನ ಮೇಲಿನ ಗೆರೆಯು ಅಳಿಸಿಹೋಗುವಂತೆ ಸ್ವಲ್ಪ ದಿನಗಳಾದ ನಂತರ ಸ್ವಾತಿಕ ಜನರ ಕೋಪ ಮಾಯವಾಗುತ್ತದೆ
ಮಹಾತ್ಮರ ಕೋಪ: ನೀರಿನ ಮೇಲೆ ಗೆರೆ ಎಳೆದಂಥಾ ಕೋಪ, ಮಹಾತ್ಮರದು ಇಂತಹ ಕೋಪ. ನೀರಿನ ಮೇಲೆ ಗೆರೆ ಎಳೆದರೆ ತಕ್ಷಣ ಅದು ಹೇಗೆ ಇಲ್ಲದಂತಾಗುವುದೋ, ಅದರಂತೆ ಮಹಾತ್ಮರಿಗೆ ಕೋಪ ಬಂದರು ಅದು ಕ್ಷಣ ಸಹ ಉಳಿಯದೆ ಮಾಯವಾಗುವುದು. ಅಲ್ಲಿ ಸೇಡಿನ, ದ್ವೇಷದ ಮನೋಭಾವವಿರದು, ತಿದ್ದುವ ಕಳಕಳಿ ಇರುತ್ತದೆ.

ಅಕ್ಕಮಹಾದೇವಿಯ ಮೇಲ್ಕಡ ವಚನದಲ್ಲಿ ಕಾಣಿಸಿದ ಸಮಾಧಾನ ಗುಣವು ಸಾಧಕನ ನಿಜವಾದ ಲಕ್ಷಣವಾಗಿದೆ. ಮುಮುಕ್ಷುವಿನ ಲಕ್ಷಣದಲ್ಲಿ ಸಾವಧಾನವೂ ಒಂದು ಗುಣವಾಗಿದೆ ಎಂಬುದನ್ನು ಗಮನಿಸಿದರೆ ಸಾಕು.

Continued...

~: ಸದ್ಗುರು ಸ್ವಾಮಿ ಲಿಂಗಾನಂದರು :~

Tuesday, 6 October 2015

Wednesday, 30 September 2015

~: ಗುರುವಿನ ಸ್ಥಾನ :~

~: ಗುರುವಿನ ಸ್ಥಾನ :~
The value of Guru

ಲಿಂಗಾಯತ ಧರ್ಮದ ಅಷ್ಟಾವರಣದಲ್ಲಿ ಗುರುವಿಗೆ ಮೊದಲನೆ ಸ್ಥಾನ ಕೊಟ್ಟರುವುದು ಗಮನಾರ್ಹವಾಗಿದೆ. ಗುರುವಿದ್ದರೆ ಲಿಂಗ; ಲಿಂಗವಿದ್ದರೆ ಜಂಗಮ; ಗುರುಲಿಂಗ ಜಂಗಮವಿದ್ದರೆ ತಾನೇ ಪಾದೋದಕ ಪ್ರಸಾದಗಳು. ಗುರುವಿಲ್ಲದವನಿಗೆ ಅಷ್ಟಾವರಣಗಳೇ ಇಲ್ಲ; ಅಷ್ಟಾವರಣ ರಹಿತನಾದವನು ಲಿಂಗವಂತನೇ ಅಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಅಕ್ಕಮಹಾದೇಯಂತೆ ಗುರುಕಾರುಣ್ಯವನ್ನು ಪಡೆಯಬೇಕು.
ಭವಪಾಶಗಳ ಹರಿದು, ಶಿವಸಂಸ್ಕಾರವನ್ನು ಕೊಡುವ, ಪೊರ್ವಜನ್ಮ ಕಳೆದು ಪುನರ್ಜಾತನನ್ನಾಗಿ ಮಾಡುವ, ಮಾಂಸ ಪಿಂಡವನ್ನು ಮಂತ್ರಪಿಂಡವನ್ನಾಗಿ ಮಾಡುವ, ಹಣೆಯ ದುರ್ಲಿಖಿತವ ಅಳಿಸಿ ಶಿವ ಮಂತ್ರವ ಬರೆಯುವ, ವಾಯು ಪ್ರಾಣಿಯಾದಾತನನ್ನು ಲಿಂಗ ಪ್ರಾಣಿಯನ್ನಾಗಿ ಮಾಡುವ, ಭವಿತನವನ್ನು ಕಳೆದು ಭಕ್ತನನ್ನಾಗಿ ಮಾಡುವ, ಪ್ರಕೃತಿ ಕಾಯವ ಕಳೆದು ಪ್ರಸಾದ ಕಾಯವ ದಯಪಲಿಸುವ, ಅಂಗ ಕರಣಂಗಳನ್ನು ಲಿಂಗ ಕಿರಣಂಗಳನ್ನಾಗಿ ಮಾಡುವ, ಭವಪಥದಲ್ಲಿದ್ಧಾತನನ್ನು ಶಿವ ಪಧದ ಗುಂಟ ಕರೆದುಕೊಂಡು ಹೋಗುವ, ಅಜ್ಞಾನಿಯಾದಾತನನ್ನು ಸುಜ್ಞಾಯನ್ನಾಗಿ ಮಾಡುವ, ನರಜನ್ಮವ ತೊಡೆದು ಹರಜನ್ಮವ ಮಾಡುವ, ಭವ ಬಂಧನವನ್ನು ಬಿಡಿಸಿ ಪರಮ ಶಿವಾನುಭವ ಸುಖವ ತೋರುವ, ಸದ್ಗುರುವನ್ನು ಎಷ್ಟು ಕೃತಜ್ಣತಾ ಭಾವನೆಯಿಂದ ಹೊಗಳಿದರೊ ಕಡಿಮೆಯೆಂದೇ ಹೇಳಬೇಕು.
~: ಸದ್ಗುರು ಸ್ವಾಮಿ ಲಿಂಗಾನಂದರು :~

For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

Thursday, 27 August 2015

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~
~:ಪೂಜೆ ಮಾಡಿದರೆ ಪುಣ್ಯವೂ ಬರಲಾರದು, ಪೂಜೆ ಬಿಟ್ಟರೆ ಪಾಪವೂ ಬರಲಾರದು :~
         ಈ ಸಮಾಜದಲ್ಲಿ ಇತ್ತಿತ್ತಲಾಗಿ ಲಿಂಗದೀಕ್ಷೆ ತೆಗೆದುಕೊಳ್ಳವ ಪದ್ಧತಿ ನಶಿಸಿ ಹೋಗುತ್ತಲಿದೆ. ಗುರು-ಭಕ್ತರಲ್ಲಿ ದೀಕ್ಷೆಯ ಸರಿಯಾದ ತಿಳವಳಿಕೆಯ ಕೊರತೆಯ ಕಾರಣ, ಗುರುಗಳು ಭಕ್ತರನ್ನು ಅನಾವಶ್ಯಕವಾಗಿ ಹೆದರಿಸುತ್ತಿದ್ದಂತೆ ಕಂಡುಬರುತ್ತದೆ. ಆದ್ದರಿಂದಲೇ ಜನರಲ್ಲಿ ಕೆಲವು ಕಲ್ಪನೆಗಳು ರೂಢಿಯಲ್ಲಿ ಬಂದಿವೆ.
"ಲಿಂಗದೀಕ್ಷೆ ಮಾಡಿಕೊಂಡ ಮೇಲೆ ಮೂರು ಸಲವೋ, ಎರಡು ಸಲವೋ, ಕನಿಷ್ಟ ಒಂದು ಸಲವಾದರೂ ಪೂಜೆಮಾಡಬೇಕಾಗುತ್ತದೆ, ನಾವು ಊರುಕೇರಿಗೆ ಹೋಗುವವರು; ಪ್ರವಾಸದಲ್ಲಿ ಲ್ಲಿಂಗಪೂಜೆಗೆ ಅನುಕೂಲವಾಗುವುದಿಲ್ಲ. ಪೂಜೆ ತಪ್ಪಿದರೆ ದೇವನು ನಮ್ಮ ಮೇಲೆ ಮುನಿದು ನಾವು ಪಾಪಕ್ಕೆ ಗುರಿಯಾಗಬಹುದು. ಆದ್ದರಿಂದ ಲಿಂಗದೀಕ್ಷೆ ಮಾಡಿಸಿಕೊಳ್ಳದೇ ಇರುವುದೇ ಕ್ಷೇಮಕರ" ಎಂದು ತಿಳಿದಿರುತ್ತಾರೆ.
ಇದು ಬಹಳ ತಪ್ಪು ಕಲ್ಪನೆಯಾಗಿದೆ.
ಪೂಜೆ ಮಾಡಿದರೆ ಪುಣ್ಯವೂ ಬರಲಾರದು, ಪೂಜೆ ಬಿಟ್ಟರೆ ಪಾಪವೂ ಬರಲಾರದು.
ಪುಣ್ಯ-ಪಾಪಗಳು ನೈತಿಕ ಸಮಸ್ಯೆಗಳು. ಎರಡನೆಯವರಿಗೆ ಕೇಡು ಮಾಡಿದರೆ ಪಾಪ ಬಂದೀತು : ಹಿತ ಮಾಡಿದರೆ ಪುಣ್ಯ ಬಂದೀತು. ಆದ್ದರಿಂದ ಲಿಂಗ ಪೂಜೆಯು ಪುಣ್ಯಗಳಿಸಲು ಅಲ್ಲ, ಶಿವನಗಳಿಸಲು ಎಂಬುದನ್ನು ನೆನಪಿನಲ್ಲಿಡಬೇಕು.
ಆದ್ದರಿಂದ ಪೂಜೆ ಮಾಡಲು ಒಮ್ಮೊಮ್ಮೆ ಅನರ್ವಾಯವಾಗಿ ಸಾಧ್ಯವಾಗದಿದ್ದರೂ ಸಹ ಅಂಗದ ಮೇಲೆ ಲಿಂಗವು ಯಾವಾಗಲೂ ಇರಬೇಕು.
ಅದಕ್ಕಾಗಿ ಸದ್ಗುರುವಿನಿಂದ ಲಿಂಗ ದೀಕ್ಷೆಯನ್ನು ಪಡೆದಿರಬೇಕು.
ದೇಹದ ಮೇಲೆ ದೇವನಿದ್ದರೆ ದೇವನನ್ನು ಬಿಟ್ಟು ನಾನು ಕ್ಷಣ ಸಹ ಅಗಲಿ ಇಲ್ಲವೆಂಬ ಆಸ್ತಿಕ್ಯ ಭಾವನೆಯಾದರೂ ಇರುವುದಿಲ್ಲವೆಂದು? ಇದೇನು ಸಾಮನ್ಯ ಸಂಗತಿಯೇ?
ಪರವಸ್ತುವಾದ ಶಿವಲಿಂಗದ ಸ್ಮರಣೆಗಿಂತಲೂ ದರ್ಶನವು ಅಧಿಕವಾದುದು. ಆ ಸ್ಮರಣ-ದರ್ಶನಗಳೆರಡಕ್ಕಿಂತಲೂ ಸದಾ ಪೂಜಿಸುವುದು ಶ್ರೇಷ್ಟವು. ಆ ಸ್ಮರಣ ದರ್ಶನ ಪೂಜಾದಿಗಳಿಗಿಂತಲೂ ಆ ಮಂಗಳಮಯವಾದ ಇಷ್ಟಲಿಂಗವನ್ನು ದೇಹದಲ್ಲಿ ಸದಾಕಾಲದಲ್ಲಿಯೂ ಧರಿಸುವುದು ಅತ್ಯಂತ ಶ್ರೇಷ್ಟವು. ಇನ್ನೇನು ಬೇಕು?  ಲಿಂಗ ಶಿಕ್ಷೆಯು ಜನಸಾಮಾನ್ಯರು ತಿಳಿದುಕೊಂಡಷ್ಟು ಕಠಿಣವಾದ ಆಚರಣೆಗಳಿಂದ ಕೂಡಿಲ್ಲವೆಂದು ತಿಳಿದರೆ ಸಾಕು.
~: ಸದ್ಗುರು ಸ್ವಾಮಿ ಲಿಂಗಾನಂದರು :~

For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

Monday, 24 August 2015

~: ಆದರ್ಶ ಶಿಕ್ಷಣ :~

~: ಆದರ್ಶ ಶಿಕ್ಷಣ :~
Perfect Education

ಇಂದಿನ ಶಿಕ್ಷಣವೇ ವಿಚಿತ್ರವಾಗೆದೆ. ಇಂದಿನ ಶಿಕ್ಷಣದಿಂದ ತಲೆ ದೊಡ್ಡದಾಗ ಬಹುದೆಂಬ ವಿನಾ ಹೃದಯ ವಿಕಾಸವಾಗಲಾರದು. ಈ ಶುಷ್ಕ ಶಿಕ್ಷಣದಿಂದಲೇ ಇಂದು ಸಮಾಜದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ನೀತಿ ಮಟ್ಟ ಕಡಿಮೆಯಾಗುತ್ತಲಿದೆ. ನೈತಿಕ-ಧಾರ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಇಂದಿನ ಶಾಲೆ ಕಾಲೇಜುಗಳಲ್ಲಿ ಕೊಡುತ್ತಿಲ್ಲವಾದ್ದರಿಂದ ಹೆಚ್ಚಿನ ನಾಗರಿಕರು ಅನೀತಿವಂತರಾಗುತ್ತಿದ್ದಾರೆ. ಹಳ್ಳಿಯ ಮತ್ತು ಅಜ್ಞ ಜನರನ್ನು ನಾನಾ ಬಗೆಯಿಂದ ವಂಚಿಸ ದುಡ್ಡು ಉಚ್ಚುತ್ತಿದ್ದಾರೆ. ನಾವು ಪಡೆದ ಜ್ಞಾನ ಅಜ್ಞ ಜನರನ್ನು ಮೋಸಗೊಳಿಸಲಿಕ್ಕಲ್ಲ; ಅಜ್ಞ ಜನರನ್ನು ಸುಜ್ಞಾನಿಗಳನ್ನಾಗಿ ಮಾಡಿ, ಸಮಾಜದ ಏಳಿಗೆಯನ್ನು ಮಾಡುವುದಕ್ಕಾಗಿಯೇ ಎಂಬುದನ್ನು ಗಮನಿಸಿದರೆ ಸಾಕು. ಶಿಕ್ಷಣದಿಂದ ನಮ್ಮ ಮೈದಾಳಬೇಕು. ಕಾಯಕದ ಘನತೆ (Dignity of labour) ಯನ್ನು ಅಳವಡಿಸಿಕೊಳ್ಳಬೇಕು.ಆದರೆ ಇಂದಿನ school Collegeಗಳಲ್ಲಿದೊರೆಯುವ ಶಿಕ್ಷಣ ತುಂಬಾ ಶುಷ್ಕವಾಗಿದೆಯೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅನೇಕ ತಪ್ಪು ಕಲ್ಪನೆಗಳು ಇಂದು ಕಲಿತವರಲ್ಲಿ ಸೇರಿವೆ. ಅದರಲ್ಲಿಯೂ ಭಾರತವು ತನ್ನ ಆಧ್ಯಾತ್ಮಿಕತೆಯ ದಿವಾಳಿಯನ್ನು ತೆಗೆಯಬಾರದೆಂದಿದ್ದರೆ, ನಮ್ಮ ತರುಣರಿಗೆ (Youth) ಧಾರ್ಮಿಕ ಶಿಕ್ಷಣವನ್ನು ಕೊಡುವದು ಮಹತ್ವದ್ದಾಗಿದೆಯೆಂದು ಮಹಾತ್ಮ ಗಾಂಧೀಜಿಯವರು ಹೇಳಿದ ಮಾತನ್ನು ನಾವು ನೆನಪಿನಲ್ಲಿಡಬೇಕು. ದೇಹ ಪರಿಶ್ರಮ (Manual Labour) ಕೀಳು ಎಂಬ ಮನೋಭವನೆ ಬೆಳೆದುಬಿಟ್ಟಿರುವುದರಿಂದ ರಾಷ್ಟ್ರದ ಅಭಿವೃದ್ಧಿಗೆ ಆತಂಕವಾಗುತ್ತಿದೆ.
~: ಸದ್ಗುರು ಸ್ವಾಮಿ ಲಿಂಗಾನಂದರು :~

For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

~: ಗುರು ಅನುಗ್ರಹ :~

~: ಗುರು ಅನುಗ್ರಹ :~
The Grace of Guru

ಶಕ್ತಿಪಾತ ಪ್ರಯೋಗ ದೃಷ್ಟಿಯಿಂದ ಮೂರು ವಿಧವಾಗಿ ಗುರುವು ಅನುಗ್ರಹವನ್ನು ತನ್ನ ಶಿಷ್ಯನಿಗೆ ಕರುಣಿಸುತ್ತಾರೆ.
೧. ಹಸ್ತಮಸ್ತಕ ಸಂಯೋಗದಿಂದ (ಇವರಿಗೆ ಬಸವ ಧರ್ಮದ ಪ್ರಕ್ರಿಯಲ್ಲಿ ಗರುಮೂರ್ತಿಯೆಂದು ಹೆಸರು)ಉದಾ: ಶ್ರೀ ಗುರು ಲಿಂಗಾನಂದರು & ರಾಮಕೃಷ್ಣ ಪರಮಹಂಸರು.
೨.ಅಂತಃಕರಣ ದೃಷ್ಟಿಯಿಂದ ಗುರುವು ತನ್ನಲ್ಲಿರುವ ಯೋಗಶಕ್ತಿಯನ್ನು ತನ್ನ ಶಿಷ್ಯನಗೆ ಕೊಡಬಲ್ಲರು, ಇವರಿಗೆ ಲಿಂಗಮೂರ್ತಿಯೆಂದು ಹೆಸರು. ಉದಾ: ಚನ್ನಬಸವಣ್ಣ & ಶ್ರೀ ಅರವಿಂದಾಶ್ರಮದ ಮಾತೋಶ್ರೀ.
೩.ಸಂಕಲ್ಪ ಮಾತ್ರದಿಂದ ಗುರುವು ತನ್ನಲ್ಲಿರುವ ಯೋಗಶಕ್ತಿಯನ್ನು ತನ್ನ ಶಿಷ್ಯನಗೆ ಕೊಡಬಲ್ಲರು, ಇವರಿಗೆ ಜಂಗಮ ಮೂರ್ತಿಯೆಂದು ಹೆಸರು. ಉದಾ: ಅಲ್ಲಮಪ್ರಭುದೇವರು & ಶ್ರೀ ಅರವಿಂದರು.
ಮಂತ್ರಪುರುಷ ಬಸವಣ್ಣನವರಿಗೆ ಪಂಚಪರುಷಗಳು ಅಳವಟ್ಟ ಕಾರಣ ಈ ಮೂರು ಅನುಗ್ರಹಿಸುವ ಸಾಮರ್ಥ್ಯ ಅವರಲ್ಲಿತ್ತು.
    -ಸದ್ಗುರು ಸ್ವಾಮಿ ಲಿಂಗಾನಂದರು

For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

Sunday, 23 August 2015

~: ಧರ್ಮ ಮತ್ತು ಸಂಸ್ಕಾರ :~

~: ಧರ್ಮ ಮತ್ತು ಸಂಸ್ಕಾರ :~
ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ.
ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು.
ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು.
ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು,
ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು.
ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು,
ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು,
ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು,
ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು,
ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು,
ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು,
ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು.
ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು.
~: ಸದ್ಗುರು ಸ್ವಾಮಿ ಲಿಂಗಾನಂದರು :~
 
For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~
I saw a beutifull Dream
ಹಲವಾರು ಜನ ಮನಶ್ಯಾಸ್ತಜ್ಞರು ಕನಸಿನ ಬಗ್ಗೆ ವಿವೇಚಿಸಿದ್ದರೂ, ಅವರೆಲ್ಲರ ದೃಷ್ಟಿಕೋನ ಮತ್ತು ಸಂಶೋಧನೆಗಳು ಸಾಮಾನ್ಯ ಕನಸುಗಳನ್ನು ಕುರಿತಾಗಿವೆ.
ಅಕ್ಕಮಹಾದೇವಿಯು ಕಂಡ ದೈವೀಕನಸು ಒಂದು ದೃಷ್ಟಿಯಿಂದ ವಿಶೇಷವಾಗಿದ್ದರೂ, ಅಕ್ಕಮಹಾದೇವಿ ಹಗಲಿರುಳು ಶಿವನ ಚಿಂತಯಲ್ಲಿದ್ದುದರಿಂದ, ದಿವ್ಯಾನುಭವ ಕೂಟಕ್ಕಾಗಿ ಹಂಬಲಿಸುತ್ತಿದ್ದುದರಿಂದ ಬಹುಶಃ ಆ ಆಸೆಯಿಂದ ಆಕೆಯ ಕನಸಿನಲ್ಲಿ ತೃಪ್ತಿಹೋಂದಿದೆ ಎಂದು ಹೇಳಬಹುದು. ಸಾಮಾನ್ಯ ಕಾಮನೆಗಳು ಕನಸಿನಲ್ಲಿ ತೃಪ್ತಿಹೊಂದಿಂದರೆ, ಅಕ್ಕಮಹಾದೇವಿಯ ಆಧ್ಯಾತ್ಮಿಕ ಕಾಮನೆ ಪವಿತ್ರವಾದ ದ್ಯೆವೀ ಕನಸಿನಲ್ಲಿ ತೃಪ್ತಿಹೊಂದಿದೆ ಎಂದು ಭಾವಿಸೋಣ.
"ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸ ಕಂಡೆ
ಅಕ್ಕಿಯಡಕೆ ತೆಂಗಿನಕಾಯಿ ಕಂಡೆ, ಚಿಕ್ಕಚಿಕ್ಕ ಕಡೆಗಳ
ಸುಲಿಪಲ್ಲ ಗೊರವನು ಭಿಕ್ಷಕ್ಕೆ ಬಂದುದ ಕಂಡೆನವ್ವಾ!
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದನು."
ಹಗಲಿರುಳು ಚನ್ನಮಲ್ಲಿಕಾರ್ಜುನನ ಧ್ಯಾನದಲ್ಲಿರುವ ಅಕ್ಕನು ಸ್ವಪ್ನಾವಸ್ಧೆಯಲ್ಲಿಯು ತನ್ನ ನಲ್ಲ ಚನ್ನಮಲ್ಲಿಕಾರ್ಜುನನ್ನು ಕಂಡಿದ್ದಾಳೆ.
ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು ಬಿ.ಎಸ್ ಸಿ. ಪದವೀಧರರಾಗಿ ನಮ್ಮ ಆಶ್ರಮಕ್ಕೆ ಬಂದರು. ಜಂಗಮದೀಕ್ಷೆ ಪಡೆದುಕೊಂಡರು. ನಂತರ ಅವರು ಎಂ.ಎ.ಫಿಲಾಸಫಿ ಓದಬೇಕೆಂದು ಒಂದು ದಿನ ಕನಸಿನಲ್ಲಿ ದೈವೀಆಜ್ಞೆ ಪಡೆದರು. ಯಾವ ವಿಶ್ವವಿದ್ಯಾಲಯದಲ್ಲಿ ಓದಬೇಕೆಂದು ಆಲೋಚಿಸುವಾಗಲೇ ಮತ್ತೊಂದು ದಿನ ಕಂಡ ಕನಸಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದಬೇಕೆಂದು ನಿರೂಪವನ್ನು ಪಡೆದರು, ಅಷ್ಟೆಅಲ್ಲದೆ ಧಾರವಾಡದಲ್ಲಿ ಒಂದು ಆಶ್ರಮವಾದಂತೆ ಕನಸು ಕಂಡು, ಆಶ್ರಮಮವಾಗಲಿರುವ ಜಾಗದ ಸ್ಪಷ್ಟ ಚಿತ್ರ ಕಂಡರು.
ಈ ಬಗೆಯ ಕನಸುಗಳು ಸುಪ್ತ ಮನಸ್ಸಿನ ಅತೃಪ್ತ ಆಸೆಗಳು ತೃಪ್ತಿ ಹೊಂದುವ ವಿಧಾನವಾಗಿರದೆ, ಇನ್ನೊಂದು ಹೊರಗಿನ (Objective Reality) ಶಕ್ತಿಯಿಂದ ಆದೇಶ ಹೊಂದಿದ್ದವಾಗಿವೆ; ಮತ್ತು ಭವಿಷ್ಯ ಸೊಚಕ ಕನಸುಗಳಾಗಿವೆ, ಮಾನವನ ಇಂದ್ರಿಯಾನುಭವಕ್ಕೆ ನಿಲುಕದ ಅತೀಂದ್ರಿಯ ಅನುಭವಗಳು ವೈಜ್ಞಾನಿಕ ವಿಶ್ಲೇಷಣೆಯ ಮಾಪನಕ್ಕೆ ಸಿಲುಕದೆ ಎಷ್ಟೋ ಇವೆ ಎಂಬುದನ್ನು ನಾವರಿತರೆ ಸಾಕು.
~: ಸದ್ಗುರು ಸ್ವಾಮಿ ಲಿಂಗಾನಂದರು :~
For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

~: ಎನ್ನ ತನ್ನಂತೆ ಮಾಡಿದ ಗುರು :~

~: ಎನ್ನ ತನ್ನಂತೆ ಮಾಡಿದ ಗುರು :~

"ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ಮೇಲೆ ಇರಿಸಿದಾಗಲೆ ಎನ್ನ ಭವಂ ನಾಸ್ತಿಯಾಯಿತ್ತು, ಎನ್ನ ತನ್ನಂತೆ ಮಾಡಿದ...." ಎಂದು ಅಕ್ಕಮಹಾದೇವಿಯು ಹೇಳುವ ಮೇಲಿನ ವಚನದಲ್ಲಿ "ಎನ್ನ ತನ್ನಂತೆ ಮಾಡಿದ" ಎಂಬ ಪದಪುಂಜದಲ್ಲಿ ಅಪಾರವಾದ ಅರ್ಧವನ್ನಿಟ್ಟುದೇ ಅಲ್ಲದೆ ಧಾರ್ಮಿಕ ಸಮತೆಯ ತತ್ವವನ್ನು ಚಲ್ಲವರಿದಿದ್ದಾರೆ. ಗುರುವು ಶಷ್ಯನನ್ನು ಅನುಗ್ರಹಿಸಿ ತನ್ನಂತೆ ಮಾಡಿ ಕೊಳ್ಳುವ ಈ ಧಾರ್ಮಿಕ ಸಮತೆಯು ಬಸವ ಧರ್ಮದ ಅಗ್ಗಳಿಕೆ. ಗುರುವು ಪರುಷವಲ್ಲ, ಜ್ಯೋತಿಯೆಂದು ಶರಣರು ಸಾರಿ ಹೇಳಿಸಿದರು ಕರ್ಮವೇ ಧಾರ್ಮಿಕ ಸಮತೆಯಾಗಿದೆ. ಪರುಷವು ಕಬ್ಬಿಣವನ್ನು ಬಂಗಾರವನ್ನಾಗಿ ಮಾಡಬಹುದು, ಆದರೆ ಪರುಷವನ್ನಾಗಿ ಮಾಡಲಾರದು; ಅರ್ಥಾತ್ ತನ್ನಂತೆ ಮಾಡಿಕೋಳ್ಳಲಾರದು. ಪರುಷ-ಕಬ್ಬಿಣ ಸಂಬಂಧದಲ್ಲಿ ಸಮತೆಯ ತತ್ವವಿಲ್ಲ. ಆದರೆ ಜ್ಯೋತಿ ತನ್ನಂತೆ ಮಾಡಿಕೊಳ್ಳುತ್ತದೆ. ನಿಮ್ಮ ದೇಹವೇ ಪ್ರಣತೆ, ಭಕ್ತಿಯೇ ತೈಲ, ಆಚಾರವೇ ಬತ್ತಿ, ಗುರುವಿನ ಜ್ಞಾನ ಜ್ಯೋತಿ ನಿಮ್ಮ ಪ್ರಣತೆಗೆ ಮುಟ್ಟದಾಗ ನಿಮ್ಮಲ್ಲಿಯೂ ಆ ಜ್ಯೋತಿ ತೊಲಗಿ ಬೆಳಗುತ್ತದೆ. ಆ ಜ್ಯೋತಿ ಈ ಜ್ಯೋತಿಗಳೆರಡೂ ಒಂದೇ ವಿಧವಾಗಿ ತೊಳಗಿ ಬೆಳಗುತ್ತದೆ. ಆಹಾ! ಎಂಥ ಸುಂದರ ಉದಾತ್ತ ಧಾರ್ಮಿಕ ಸಮತೆಯ ಕಲ್ಪನೆಯಿದು!! ಆದರೆ ಭಕ್ತಿಯೆಂಬ ತೈಲ, ಆಚಾರವೆಂಬ ಬತ್ತಿ ಏಷ್ಯನ್ ತನುವೆಂಬ ಪ್ರಣತೆಯಲ್ಲಿಲ್ಲದಿದ್ದರೆ ಹೇಗೆ ತಾನೆ ಗುರುವು ಜ್ಯೋತಿಯನ್ನಂಟಿಸಬಲ್ಲ? .
~: ಸದ್ಗುರು ಸ್ವಾಮಿ ಲಿಂಗನಂದರು :~