Thursday 27 August 2015

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~
~:ಪೂಜೆ ಮಾಡಿದರೆ ಪುಣ್ಯವೂ ಬರಲಾರದು, ಪೂಜೆ ಬಿಟ್ಟರೆ ಪಾಪವೂ ಬರಲಾರದು :~
         ಈ ಸಮಾಜದಲ್ಲಿ ಇತ್ತಿತ್ತಲಾಗಿ ಲಿಂಗದೀಕ್ಷೆ ತೆಗೆದುಕೊಳ್ಳವ ಪದ್ಧತಿ ನಶಿಸಿ ಹೋಗುತ್ತಲಿದೆ. ಗುರು-ಭಕ್ತರಲ್ಲಿ ದೀಕ್ಷೆಯ ಸರಿಯಾದ ತಿಳವಳಿಕೆಯ ಕೊರತೆಯ ಕಾರಣ, ಗುರುಗಳು ಭಕ್ತರನ್ನು ಅನಾವಶ್ಯಕವಾಗಿ ಹೆದರಿಸುತ್ತಿದ್ದಂತೆ ಕಂಡುಬರುತ್ತದೆ. ಆದ್ದರಿಂದಲೇ ಜನರಲ್ಲಿ ಕೆಲವು ಕಲ್ಪನೆಗಳು ರೂಢಿಯಲ್ಲಿ ಬಂದಿವೆ.
"ಲಿಂಗದೀಕ್ಷೆ ಮಾಡಿಕೊಂಡ ಮೇಲೆ ಮೂರು ಸಲವೋ, ಎರಡು ಸಲವೋ, ಕನಿಷ್ಟ ಒಂದು ಸಲವಾದರೂ ಪೂಜೆಮಾಡಬೇಕಾಗುತ್ತದೆ, ನಾವು ಊರುಕೇರಿಗೆ ಹೋಗುವವರು; ಪ್ರವಾಸದಲ್ಲಿ ಲ್ಲಿಂಗಪೂಜೆಗೆ ಅನುಕೂಲವಾಗುವುದಿಲ್ಲ. ಪೂಜೆ ತಪ್ಪಿದರೆ ದೇವನು ನಮ್ಮ ಮೇಲೆ ಮುನಿದು ನಾವು ಪಾಪಕ್ಕೆ ಗುರಿಯಾಗಬಹುದು. ಆದ್ದರಿಂದ ಲಿಂಗದೀಕ್ಷೆ ಮಾಡಿಸಿಕೊಳ್ಳದೇ ಇರುವುದೇ ಕ್ಷೇಮಕರ" ಎಂದು ತಿಳಿದಿರುತ್ತಾರೆ.
ಇದು ಬಹಳ ತಪ್ಪು ಕಲ್ಪನೆಯಾಗಿದೆ.
ಪೂಜೆ ಮಾಡಿದರೆ ಪುಣ್ಯವೂ ಬರಲಾರದು, ಪೂಜೆ ಬಿಟ್ಟರೆ ಪಾಪವೂ ಬರಲಾರದು.
ಪುಣ್ಯ-ಪಾಪಗಳು ನೈತಿಕ ಸಮಸ್ಯೆಗಳು. ಎರಡನೆಯವರಿಗೆ ಕೇಡು ಮಾಡಿದರೆ ಪಾಪ ಬಂದೀತು : ಹಿತ ಮಾಡಿದರೆ ಪುಣ್ಯ ಬಂದೀತು. ಆದ್ದರಿಂದ ಲಿಂಗ ಪೂಜೆಯು ಪುಣ್ಯಗಳಿಸಲು ಅಲ್ಲ, ಶಿವನಗಳಿಸಲು ಎಂಬುದನ್ನು ನೆನಪಿನಲ್ಲಿಡಬೇಕು.
ಆದ್ದರಿಂದ ಪೂಜೆ ಮಾಡಲು ಒಮ್ಮೊಮ್ಮೆ ಅನರ್ವಾಯವಾಗಿ ಸಾಧ್ಯವಾಗದಿದ್ದರೂ ಸಹ ಅಂಗದ ಮೇಲೆ ಲಿಂಗವು ಯಾವಾಗಲೂ ಇರಬೇಕು.
ಅದಕ್ಕಾಗಿ ಸದ್ಗುರುವಿನಿಂದ ಲಿಂಗ ದೀಕ್ಷೆಯನ್ನು ಪಡೆದಿರಬೇಕು.
ದೇಹದ ಮೇಲೆ ದೇವನಿದ್ದರೆ ದೇವನನ್ನು ಬಿಟ್ಟು ನಾನು ಕ್ಷಣ ಸಹ ಅಗಲಿ ಇಲ್ಲವೆಂಬ ಆಸ್ತಿಕ್ಯ ಭಾವನೆಯಾದರೂ ಇರುವುದಿಲ್ಲವೆಂದು? ಇದೇನು ಸಾಮನ್ಯ ಸಂಗತಿಯೇ?
ಪರವಸ್ತುವಾದ ಶಿವಲಿಂಗದ ಸ್ಮರಣೆಗಿಂತಲೂ ದರ್ಶನವು ಅಧಿಕವಾದುದು. ಆ ಸ್ಮರಣ-ದರ್ಶನಗಳೆರಡಕ್ಕಿಂತಲೂ ಸದಾ ಪೂಜಿಸುವುದು ಶ್ರೇಷ್ಟವು. ಆ ಸ್ಮರಣ ದರ್ಶನ ಪೂಜಾದಿಗಳಿಗಿಂತಲೂ ಆ ಮಂಗಳಮಯವಾದ ಇಷ್ಟಲಿಂಗವನ್ನು ದೇಹದಲ್ಲಿ ಸದಾಕಾಲದಲ್ಲಿಯೂ ಧರಿಸುವುದು ಅತ್ಯಂತ ಶ್ರೇಷ್ಟವು. ಇನ್ನೇನು ಬೇಕು?  ಲಿಂಗ ಶಿಕ್ಷೆಯು ಜನಸಾಮಾನ್ಯರು ತಿಳಿದುಕೊಂಡಷ್ಟು ಕಠಿಣವಾದ ಆಚರಣೆಗಳಿಂದ ಕೂಡಿಲ್ಲವೆಂದು ತಿಳಿದರೆ ಸಾಕು.
~: ಸದ್ಗುರು ಸ್ವಾಮಿ ಲಿಂಗಾನಂದರು :~

For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html

No comments:

Post a Comment