Wednesday 14 October 2015

Praise & Criticize ಸ್ತುತಿ-ನಿಂದೆ

Praise & Criticize ಸ್ತುತಿ-ನಿಂದೆ

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆ ತೆರೆಗಳಿಗಂಜಿದಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟದ ಬಳಿಕ ಸ್ತುತಿನಿಂದೆಗಳು ಬಂದಡೆ,
ಮನದಲ್ಲಿ ಕೋಪವತಾಳದೆ ಸಮಾಧಾನಿಯಾಗಿರಬೇಕು.
-ಮ. ಅ. ವ.  ೧೩೪

ನಿಂದೆ ಎರಗಿದಾಗ ಮಹಾಜ್ಞಾನಿ ಅಕ್ಕಮಹಾದೇವಿ ಹೇಗೆ ಅದನ್ನು ಸ್ವೀಕರಿಸಿದರು ಎಂಬುದನ್ನು ಉತ್ತರಾರ್ಧದಲ್ಲಿ ನೋಡಿ, ವಿಪರೀತ ಪ್ರಸಂಗಗಳು ಎದುರಾದಾಗ ಸಾಧಕರು ತಮ್ಮ ಉನ್ನತ ಸ್ಥಿತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು; ಅಥವಾ ಅಂಥ ವಿಪರೀತ ಪ್ರಸಂಗಗಳನ್ನು ಯಾವ ರೀತಿ ಎದುರಿಸಿ ಸಿದ್ಧಪುರುಷರಾಗಬೇಕು ಎಂಬುದನ್ನು ಸಮಾಲೋಚಿಸುವಾ.

ಲೋಕದಲ್ಲಿ ಹುಟ್ಟಿ ಬಂದ ನಂತರ ಒಳ್ಳೆಯವರಿಂದ ಸ್ತುತಿ, ದುಷ್ಟರಿಂದ ನಿಂದೆ ಬರುವುದು ಅನಿವಾರ್ಯವೇ ಆಗಿದೆ. ಪ್ರಪಂಚದಲ್ಲಿ ಒಳ್ಳಿತು (Good) ಮತ್ತು ಅನಿಷ್ಟ (Evil) ವೆಂಬ ತತ್ವಗಳು ಯಾವಾಗಲೂ ಇರತಕ್ಕವುಗಳೇ. ಸ್ತುತಿ ಬಂದಾಗ ಹಿಗ್ಗಿ ಅಹಂಕಾರದಿಂದ ಬೀಗದೆ, ನಿಂದೆ ಬಂದಾಗ ಕುಗ್ಗಿ ಹತಾಶಗೊಳ್ಳದೆ, ಮನದಲ್ಲಿ ಯಾವ ಪ್ರಕಾರದ ಕೋಪವನ್ನೂ ಮಾಡಿಕೊಳ್ಳದೆ ಸಮಾಧಾನಿಯಾಗಿ ಚಿತ್ತ ಸಮತೆಯನ್ನು ಕಾಯ್ದು ಕೊಂಡು ಹೋಗಬೇಕೆಂದು ಅಕ್ಕ ಈ ವಚನದಲ್ಲಿ ಚಿತ್ತಸಮತೆಯ ಮಹಾನ್ ಸಂದೇಶವನ್ನು ಹೇಳಿದ್ದಾರೆ.

ಕೋಪವೆಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಕೋಪವು ನಾಲ್ಕು ಪ್ರಕಾರವಾಗಿ ಇರುತ್ತದೆ. ತಾಮಸ, ರಾಜಸ, ಸಾತ್ವಿಕ ಮತ್ತು ಮಹಾತ್ಮರ ಕೋಪ ಎಂಬುದಾಗಿ.
ತಾಮಸ ಕೋಪ: ಚರ್ಮದ ಮೇಲೆ ಬರೆ ಎಳೆದಂಥಾ ಕೋಪ. ದನಗಳ ಚರ್ಮದ ಮೇಲೆ ಎಳೆದ ಬರೆ ಹೇಗೆ ನಾಶವಾಗುವುದಿಲ್ಲವೋ, ಶಾಶ್ವತವಾಗಿ ಉಳಿಯುವುದೋ ಅದರಂತೆ ತಾಮಸ ಜೀವಿಗಳು ಯಾರದೋ ವಿಷಯವಾಗಿ ಎಂದೋ ಕೋಪ ತಾಳಿದವರು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರೊಡನೆ ಕಚ್ವಾಡುವರು, ಶತ್ರುವಿನ ಸರ್ವನಾಶಕ್ಕೆContinuedಸುವರು.
ರಾಜಸ ಕೋಪ: ಕಲ್ಲಿನ ಮೇಲೆ ಗೆರೆ ಎಳೆದಂಥಾ ಕೋಪ, ಇದು ರಾಜಸ ಜನರ ಕೋಪ. ಕಾಲವು ಗತಿಸಿದ ನಂತರ ಕಲ್ಲಿನ ಗೆರೆ ಅಳುಕಿದಂತೆ ರಾಜಸ ವ್ಯಕ್ತಿಗಳಲ್ಲಿರುವ ಕೋಪ ಕಡಿಮೆಯಾಗಬಹುದು.
ಸಾತ್ವಿಕ ಕೋಪ: ಉಸುಕಿನ ಮೇಲೆ ಗೆರೆ ಎಳೆದಂತಹ ಕೋಪ, ಗಾಳಿ ಬಿಟ್ಟಾಗ ಉಸುಕಿನ ಮೇಲಿನ ಗೆರೆಯು ಅಳಿಸಿಹೋಗುವಂತೆ ಸ್ವಲ್ಪ ದಿನಗಳಾದ ನಂತರ ಸ್ವಾತಿಕ ಜನರ ಕೋಪ ಮಾಯವಾಗುತ್ತದೆ
ಮಹಾತ್ಮರ ಕೋಪ: ನೀರಿನ ಮೇಲೆ ಗೆರೆ ಎಳೆದಂಥಾ ಕೋಪ, ಮಹಾತ್ಮರದು ಇಂತಹ ಕೋಪ. ನೀರಿನ ಮೇಲೆ ಗೆರೆ ಎಳೆದರೆ ತಕ್ಷಣ ಅದು ಹೇಗೆ ಇಲ್ಲದಂತಾಗುವುದೋ, ಅದರಂತೆ ಮಹಾತ್ಮರಿಗೆ ಕೋಪ ಬಂದರು ಅದು ಕ್ಷಣ ಸಹ ಉಳಿಯದೆ ಮಾಯವಾಗುವುದು. ಅಲ್ಲಿ ಸೇಡಿನ, ದ್ವೇಷದ ಮನೋಭಾವವಿರದು, ತಿದ್ದುವ ಕಳಕಳಿ ಇರುತ್ತದೆ.

ಅಕ್ಕಮಹಾದೇವಿಯ ಮೇಲ್ಕಡ ವಚನದಲ್ಲಿ ಕಾಣಿಸಿದ ಸಮಾಧಾನ ಗುಣವು ಸಾಧಕನ ನಿಜವಾದ ಲಕ್ಷಣವಾಗಿದೆ. ಮುಮುಕ್ಷುವಿನ ಲಕ್ಷಣದಲ್ಲಿ ಸಾವಧಾನವೂ ಒಂದು ಗುಣವಾಗಿದೆ ಎಂಬುದನ್ನು ಗಮನಿಸಿದರೆ ಸಾಕು.

Continued...

~: ಸದ್ಗುರು ಸ್ವಾಮಿ ಲಿಂಗಾನಂದರು :~

5 comments: