Saturday, 12 March 2016

ಪೂಜ್ಯ ಶ್ರೀ ಜಗದ್ಗುರು ಮಾತೆ ಮಾಹಾದೇವಿ, ಬಸವ ಧರ್ಮ ಪೀಠ, ಕೂಡಲಸಂಗಮ



ಓಂ ಶ್ರೀ ಗುರು ಬಸವ ಲಿಂಗಾಯ ನಮಃ


                  866666


ಆಧ್ಯಾತ್ಮ ಸಾಗರದ ಅನರ್ಘ್ಯ ರತ್ನ ಪರಮ ಪೂಜ್ಯ ಮಾತೆ ಮಹಾದೇವಿಯವರ (ಬಸವಾತ್ಮಜೆಯವರ )ಬದುಕಿನ ಒಂದು ನೋಟ


👉ಕಾಯಕ:ವಿಶ್ವದ ಪ್ರಥಮ ಮಹಿಳಾ ಜಗದ್ಗುರುಗಳು (ಜಂಗಮರು)

👉ದಿಕ್ಷಾ ಗುರು:ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು

👉ಅಂಕಿತ ನಾಮ:ಸಚ್ಚಿದಾನಂದ

👉ಜನನ: ೧೩ ಮಾರ್ಚ,1946

👉ಉರು: ಚಿತ್ರದುರ್ಗ ಜಿಲ್ಲೆಯ ಸಾಸಲಟ್ಟಿ

👉ಜನ್ಮ ನಾಮ: ರತ್ನ

👉ತಂದೆ : ಡಾ ಬಸಪ್ಪನವರು

👉ತಾಯಿ : ಗಂಗಮ್ಮನವರು

👉ಜಂಗಮ ದೀಕ್ಷೆ ಪಡೆದದ್ದು:5 ನೇ ಏಪ್ರಿಲ್ 1966


      ಪರಮ ಪೂಜ್ಯ ಮಾತಾಜಿಯವರು ಬಾಲ್ಯದಿಂದಲೂ ಆಧ್ಯಾತ್ಮದ ಕಡಗೆ ತುಂಬಾ ಒಲವನ್ನು ಇಟ್ಟುಕೊಂಡಿದ್ದವರು, ಬಾಲ್ಯದಲ್ಲೆ ಸುಮಾರು 500ಕ್ಕು ಹೆಚ್ಚು ಪುಸ್ತಕಗಳನ್ನ ಓದಿ ಮುಗಿಸಿದ ಮಹಾನ್  ಚೇತನ,  ಅವರ ಪೂರ್ವಾಶ್ರಮದ (ರತ್ನ)ಹೆಸರೆ ಹೇಳುವಂತೆ ಅವರು ಬಸವ ಧರ್ಮಕ್ಕೆ ಸಿಕ್ಕ "ಅನರ್ಘ್ಯ ರತ್ನ"ವೆ ಸರಿ, ಕಿರಿದಾದ ವಯಸ್ಸಿನಲ್ಲಿಯೇ ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಾಯುತಿದ್ದಾಗ ಅವರಿಗೆ ಸಿಕ್ಕಿದ್ದು "ಪರಮ ಪೂಜ್ಯ ಪ್ರವಚನ ಪಿತಾಮಹ "ಲಿಂಗಾನಂದ ಮಹಾಸ್ವಾಮಿಗಳು" ಲಿಂಗಾನಂದ ಮಹಾಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದ ರತ್ನ(ಮಾತಾಜಿಯವರು) ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳುವ ಉದ್ದೇಶದಿಂದ 19 ಆಗಸ್ಟ್ 1965ರಂದು ತನ್ನ ತನವನ್ನು  ಬಿಟ್ಟು ಧರ್ಮ ಪ್ರಚಾರಕ್ಕೆ ಮುಂದಿನ ಜೀವನವನ್ನು ಅರ್ಪಿಸುತ್ತಾರೆ  ,21 ಅಗಸ್ಟ 1965ರಂದ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ದಿಕ್ಷೆಯನ್ನು ಪಡೆದು ಕೊಳ್ಳುತ್ತಾರೆ ,ಆದರೆ ಅವರ  ಮನಸ್ಸಿಗೆ ಸಮಾಧಾನವಿರುವುದಿಲ್ಲಾ ತಮ್ಮನ್ನು ತಾವು ತ್ಯಾಗ ಜೀವನಕ್ಕೆ ಅರ್ಪಿಸಿ ಕೊಂಡು ಬಸವಾದಿ ಶರಣರ ತತ್ವಗಳನ್ನ ಜಗತ್ತಿಗೆ ಬಿತ್ತಿ ಬೆಳೆಸುವ ಉದ್ದೇಶದಿಂದ 5-4-1966 ರತ್ನ ಅನರ್ಘ್ಯ ರತ್ನವಾಗಿ ಲಿಂಗಾಯತರ ಆಶಾಕಿರಣವಾಗಿ ತಮ್ಮ ಇಚ್ಛೆಯಂತೆ ಜಂಗಮ ದಿಕ್ಷೆ ಪಡೆದುಕೊಳ್ಳುತ್ತಾರೆ ,ಅಲ್ಲಿಂದ ನೇರವಾಗಿ ಋಷಿಕೇಶಕ್ಕೆ ಬಂದ ಪರಮ ಪೂಜ್ಯ ಮಾತಾಜಿಯವರು ಗಂಗತರಂಗ ಪುಸ್ತಕ ರಚನೆ ಮಾಡುತ್ತಾರೆ ,


👉ಬೃಹತ್ ಗ್ರಂಥವಾದ "ಬಸವ ತತ್ವ ದರ್ಶನ"  ಕೇವಲ 3 ತಿಂಗಳಲ್ಲಿ (1967. ಮೇ - ಜುಲೈ)ರಚಿಸಿ ಅಪ್ಪಾಜೀ ಮತ್ತು ಬಸವ ಭಕ್ತರಿಗೆ ಅರ್ಪಿಸುತ್ತಾರೆ,


👉ಧರ್ಮ ಪ್ರಚಾರಕ್ಕೆ ಅನುಕೂಲವಾಗಲೆಂದು 1968 ಎಪ್ರಿಲ್ 13 ರಂದು ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರ ಜಯಂತಿಯಂದು ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ


👉14-1-1970 ಲಿಂಗಾಂಗ ಯೊಗಿ ಸಿದ್ದರಾಮೇಶ್ವರ ಜಯಂತಿಯಂದು ಬಸವ ಧರ್ಮಿಯರಿಗಾಗಿ ,ಬಸವ ತತ್ವ ಪ್ರಚಾರಕ್ಕೆ ಅನುಕೂಲವಾಗಲೆಂದು ಕಲ್ಯಾಣ ಕಿರಣ ಮಾಸ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆ


👉21- 4-1970 ಗುರು ಬಸವಣ್ಣನವರ ಆಶೀರ್ವಾದದಿಂದ ,ಪರಮ ಪೂಜ್ಯ ಲಿಂಗಾನಂದ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ

ಐತಿಹಾಸಿಕ ಅಕ್ಕ ಮಹಾದೇವಿ ಅನುಭವ ಪಿಠವೆಂಬ ವಿಶ್ವದ ಮೊಟ್ಟಮೊದಲ  ಮಹಿಳಾ ಜಗದ್ಗುರು ಪೀಠ ಸ್ಥಾಪನೆ. ಅದರ ಪ್ರಥಮ ಪೀಠಾಧ್ಯಕರಾಗಿ ಮಾತಾಜಿಯವರು ಪ್ರತಿಜ್ಞಾವಿಧಿ ಸ್ವೀಕರಿಸಿದರು


👉9-12- 1973 ಸಾಮಾಜಿಕ ಕಾದಂಬರಿ #ಹೆಪ್ಪಿಟ್ಟ ಹಾಲು ಪುಸ್ತಕ ಬಿಡುಗಡೆ, ಈ ಕೃತಿಗೆ ರಾಜ್ಯ ಸಾಹಿತ್ಯ ಆಕಾಡೆಮಿ ಪುರಸ್ಕಾರ ಕಿರಿಯ ವಯಸ್ಸಿನಲ್ಲಿಯೆ ಹಿರಿದಾದ ಸಾಧನೆ ಮಾಡಿದ ಕೀರ್ತಿ ಮಾತಾಜಿಯವರದು


👉4-5-1975 ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ,ಬಸವ ಜಯಂತಿಯಂದು ಉದ್ಘಾಟನೆ


👉1976 ಬಸವ ಧರ್ಮ ಪ್ರಚಾರಕ್ಕೆ ಇಂಗ್ಲೆಂಡ್ ಪ್ರವಾಸ

👉1977 ವಿಶ್ವ ಕಲ್ಯಾಣ ಮಿಷನ್(ಟ್ರಸ್ಟ್ )ಸ್ಥಾಪನೆ

👉1978 ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ

👉1980 ಬಸವ ಧರ್ಮ ಪ್ರಚಾರಕ್ಕೆ ಅಮೇರಿಕ ಪ್ರವಾಸ

👉1983 ಗುರು ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ ಕ್ರಾಂತಿ ಯೋಗಿ ಬಸವಣ್ಣ ಚಲನಚಿತ್ರ ನಿರ್ಮಾಣ

👉ಕೂಡಲಸಂಗಮ ಧರ್ಮ ಕ್ಷೇತ್ರವೆಂದು ಘೋಷಣೆ

👉1988 ಜ,13,14,15 ರಂದು ಕೂಡಲಸಂಗಮದಲ್ಲಿ ಐತಿಹಾಸಿಕ ಮೊದಲನೆಯ ಶರಣ ಮೇಳ (#Sharanamela) ಸುಮಾರು 2ಲಕ್ಷಕ್ಕು ಅಧಿಕ ಜನರನ್ನು ಆಕರ್ಷಿಸಿತು

👉1988 ಜನವರಿ 13 ರಂದು ರಾಷ್ಟ್ರೀಯ ಬಸವ ದಳ ಪುನರ್ಘಟನೆ

👉1992 ಜನವರಿ 13 ರಂದು ಬಸವಣ್ಣನವರ ತಪೋ ಭೂಮಿ ಕೂಡಲಸಂಗಮದಲ್ಲಿ ಬಸವ ಧರ್ಮದ ಪರಮೊಚ್ಛ ಪೀಠ ಸ್ಥಾಪಿಸಿ ಬಸವ ಧರ್ಮದ ಮಹಾಜಗದ್ಗುರು ಪೀಠದ ಪ್ರಥಮ ಪೀಠಾಧ್ಯಕ್ಷರಾಗಿ

#ಪ್ರವಚನ_ಪಿತಾಮಹ  ಲಿಂಗಾನಂದ ಮಹಾಸ್ವಾಮಿಜಿಯವರಿಂದ ಪೀಠಾರೊಹಣ

👉1992 ಹೊರ ರಾಜ್ಯದಲ್ಲಿರುವ ಬಸವ ಧರ್ಮಿಯರಿಗಾಗಿ ಯಶಸ್ವಿ ಪ್ರಥಮ ಬಸವ ಧರ್ಮ ಸಮ್ಮೇಳನ ತಮಿಳುನಾಡಿನ ಊಟಿಯಲ್ಲಿ

1994 ರಲ್ಲಿ ದ್ವಿತೀಯ ಬಸವಧರ್ಮ ಸಮ್ಮೇಳನ ನೆರೆಯ ರಾಜ್ಯದ ಹೈದರಾಬಾದಿನಲ್ಲಿ

1995 ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತೃತೀಯ ಬಸವ ಧರ್ಮ ಸಮ್ಮೇಳನ


👉20-6-1995 ಪ್ರವಚನ ಪಿತಾಮಹ  ಪರಮ ಪೂಜ್ಯ ಲಿಂಗಾನಂದ ಅಪ್ಪಾಜಿಯವರು  ಲಿಂಗೈಕ್ಯ

👉13-1-1996 ಮಹಾಜಗದ್ಗುರು ಪೀಠದ 2ನೇ ಯ ಜಗದ್ಗುರುವಾಗಿ ಪೀಠಾರೊಹಣ.

👉14-1-1996 ಧರ್ಮ ಕ್ಷೇತ್ರ ಕೂಡಲಸಂಗಮದ ಮಹಾಮನೆ ಮಠದಲ್ಲಿ  ಗಣಲಿಂಗ ಸ್ಥಾಪನೆ

👉14-4-1996 ಜಗನ್ಮಾತಾ ಅಕ್ಕಮಹಾದೇವಿ ಮಹಿಳಾ ಜಗದ್ಗುರುಪೀಠಕ್ಕೆ  2ನೆಯ ಮಹಿಳಾ ಜಗದ್ಗುರುವಾಗಿ ಗಂಗಾಮಾತಾಜಿಯವರನ್ನ ಪೀಠಾರೋಹಣ ಮಾಡಿಸಿದ್ದು

👉1996 ರಲ್ಲಿ ಧಾರವಾಡದಲ್ಲಿ ನಾಲ್ಕನೆಯ ಬಸವ ಧರ್ಮ ಸಮ್ಮೇಳನ

👉3-11-1996ರಂದು ಭಾರತದ ರಾಜಧಾನಿಯಾದ ನವದೆಹಲಿಯಲ್ಲಿ ಬಸವೇಶ್ವರ ದಿವ್ಯಜ್ಞಾನ ವಿದ್ಯಾಲಯ ಸ್ಥಾಪನೆ


👉1997 ರಲ್ಲಿ  ಯಶಸ್ವಿ 5ನೇಯ ಬಸವ ಧರ್ಮ ಸಮ್ಮೇಳನ ಭಾರತದ ರಾಜಧಾನಿ ನವದೆಹಲಿಯಲ್ಲಿ

👉8-8-1997 ರಂದು ಬಸವಣ್ಣನವರ ಭಾವಚಿತ್ರದ ಅಂಚೆಚಿಟಿ ಬಿಡುಗಡೆಗೆ ಕೆಂದ್ರ ಸರಕಾರಕ್ಕೆ ಮನವಿ ಮತ್ತು ಯಶಸ್ವಿ

👉1998ರಲ್ಲಿ 6ನೇ ಯಶಸ್ವಿ ಬಸವ ಧರ್ಮ ಸಮ್ಮೇಳನ ನೇರೆ ರಾಜ್ಯ ಮಹಾರಾಷ್ಟ್ರದ ಮುಂಬೈನಲ್ಲಿ

👉2001ರಲ್ಲಿ ಬಸವಣ್ಣವರ ಕಾರ್ಯ ಕ್ಷೇತ್ರ,ಶರಣರಾಡಿದ ನಾಡು, ಶರಣ ಭೂಮಿ ಬಸವ ಕಲ್ಯಾಣದಲ್ಲಿ  ಶರಣ ಗ್ರಾಮ ನಿರ್ಮಾಣಕ್ಕೆ ಪಣ ತೊಟ್ಟು ಜಾಗ ಖರೀದಿ

👉30-4-2002ರಲ್ಲಿ ಗುರು ಬಸವಣ್ಣನವರ ಕನಸಿನ ಕೂಸಾದ ಕಲ್ಯಾಣ ಪರ್ವ(ಗಣ ಪರ್ವ)ಪುನರ್ ಆರಂಭ ಮತ್ತು ಐತಿಹಾಸಿಕ ಅಲ್ಲಮಪ್ರಭು ಪಿಠ ಪುನರ್ ಸ್ಥಾಪನೆ

👉2004ರಲ್ಲಿ  ಜಗತ್ತಿಗೆ ಬಸವ ತತ್ವ ಬಿತ್ತುವ ಉದ್ದೇಶದಿಂದ ದ್ವಿತೀಯ ಬಾರಿ ಅಮೇರಿಕಕ್ಕೆ ಮಾತಾಜಿ ಪ್ರಯಾಣ

👉1-9-2004 ರಲ್ಲಿ ಗುರು #Basaveshwara ರ 108 ಅಡಿ ಪುತ್ಥಳಿ ನಿರ್ಮಾಣಕ್ಕೆ ಚಾಲನೆ

👉2005 ರಲ್ಲಿ ಭಾರತದ ರಾಜಧಾನಿಯಲ್ಲಿ ಐತಿಹಾಸಿಕ ಮತ್ತು ಯಶಸ್ವಿ ಬಸವ ಧರ್ಮ ಸಮ್ಮೇಳನ

👉 2006 ರಲ್ಲಿ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಮೊದಲನೆಯ ಗಣಮೇಳಾಪ ಪ್ರಾರಂಭ

👉24-12-2006 ರಂದು ಭಾರತದ ರಾಜಧಾನಿ ನವದೆಹಲಿಯ ಬೆಂಗಾಲಿ ಕಾಲೋನಿಯಲ್ಲಿ ಬಸವ ಮಂಟಪ ಉದ್ಘಾಟನೆ

👉2008ರ ಏಪ್ರಿಲ್ ನಲ್ಲಿ ಚನೈನಲ್ಲಿ ಲಿಂಗಾಯತ ಧರ್ಮ ಸಮ್ಮೇಳನ

👉2011ರಲ್ಲಿ  ಪುಣೆಯಲ್ಲಿ ಬಸವ ಧರ್ಮ ಸಮ್ಮೇಳನ

👉2011ರಲ್ಲಿ ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಕಲ್ಯಾಣಮ್ಮಾ ಧಾಮ ನಿರ್ಮಾಣ ಮತ್ತು ಬಸವ ಕೃಪಾ ಅನಾಥಾಲಯ ನಿರ್ಮಾಣ


👉2012 ರಲ್ಲಿ ವಿಶ್ವದ ಅತೀ ಎತ್ತರದ (ಅಂದಿಗೆ)(108 ಅಡಿ) ಗುರು ಬಸವಣ್ಣನವರ ಪುತ್ಥಳಿ ಲೋಕಾರ್ಪಣೆ


👉2014 ರಲ್ಲಿ ಕೂಡಲ ಸಂಗಮದಲ್ಲಿ ಬಡ ಅನಾಥ ಮಕ್ಕಳಿಗಾಗಿ ಬಸವ ಭಾರತಿ ಪ್ರಾಥಮಿಕ ಶಾಲೆ ಸ್ಥಾಪನೆ

ಸ್ತ್ರೀ ಸಮಾನತೆಯನ್ನು ವಿಶ್ವಕ್ಕೆ ಸಾರಿದ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂದು  ಹಗಲಿರುಳು ಶ್ರಮಿಸುತ್ತಿರುವರು. ನವದೆಹಲಿ, ಬೆಂಗಳೂರು ನಗರಗಳಲ್ಲಿ  ಬೃಹತ್ ರಾಯ್ಲಿ.


ಮುಂದುವರೆಯುವುದು.....


🔯ಶರಣು ಶರಣಾರ್ಥಿ🔯

No comments:

Post a Comment