Wednesday, 29 June 2016

ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳವರು



ಲಿಂ|| ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳವರು.

ಬಸವ ಧರ್ಮದ ಮಾಹಾಜಗದ್ಗುರು ಪೀಠದ ಪ್ರಥಮ ಪೀಠಾಧೀಶರು.
ಜನನ : 15-09-1931
ಉರು: ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೋಕಿನ ಮನುಗೂಳಿ ಗ್ರಾಮ.
ವಿದ್ಯಾಭ್ಯಾಸ: ಬಿ.ಎ. ಆನರ್್ಸ ಪದವಿ.
25-04-1955 : ಆಧ್ಯಾತ್ಮಿಕ ಮಾನಸಾಂತರ ಹೊಂದಿದರು.
19-11-1956: ಜ್ಞಾನ ಸನ್ಯಾಸವನ್ನು ಸ್ವೀಕರಿಸಿದರು.
12-01-1992: ಬಸವ ಧರ್ಮದ ಮಾಹಾಜಗದ್ಗುರು ಪೀಠವನ್ನು ಏರಿದರು.
30-06-1995 : ಹಿರಿಉರಿನಲ್ಲಿ ಪ್ರವಚನ ಮಾಡುತ್ತ ಲಿಂಗೈಕ್ಯರಾಗಿ ಕ್ರಿಯಾ ವಿಶ್ರಾಂತಿಯನ್ನೈದಿದರು.

ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೂ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಣಾನ ದಾಸೋಹ ಮಾಡುತ್ತ ಜನರಿಂದ ಪ್ರವಚನ ಪಿತಾಮಹ ಎಂಬ ಬಿರುದ್ದು ಪಡೆದರು.
ವಿಶ್ವಗುರು ಬಸವಣ್ಣನವರು ಬೋಧಿಸಿದ ವಿಶ್ವಧರ್ಮದ ಸಾರವನ್ನು ಪ್ರವಚನ, ಸಾಹಿತ್ಯ ಕೃತಿಗಳ ಮೂಲಕ ಪ್ರಚಾರ ಮಾಡಿದ್ದರು.
 ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಿನಿಂದ ಸ್ಥಾಪಿಸಿ, ತಮ್ಮ ಕರಕಮಲ ಸಂಜಾತೆ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರನ್ನು ಪ್ರಥಮ ಅಧಿಕಾರಿಯನ್ನಾಗಿ ಮಾಡಿ, ಶ್ರೀ ಸಮಾನತಾ ತತ್ವವನ್ನು ಎತ್ತಿಹಿಡಿದ ಕ್ರಾಂತಿಕಾರಿಗಳು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿದರು.
 ಕೂಡಲ ಸಂಗಮ ಕ್ಷೇತ್ರವನ್ನು ಸರ್ವಾಂಗ ಸುಂದರವಾಗಿ ಕಟ್ಟಲೋಸುಗ ಬಸವ ಧರ್ಮ ಪೀಠ ಟ್ರಸ್ಟನ್ನು ರಚಿಸಿ, ಬೃಹತ್ ಯೋಜನೆಗಳನ್ನು ಹಾಕಿರುವ ಅವಿಶ್ರಾಂತ ಕ್ರಿಯಾಮೂರ್ತಿ.
 ನಾಡಿನಾದ್ಯಂತ ಸಂಚರಿಸಿ, ಜನಮನದಲ್ಲಿ ಬಸವ ತತ್ತ್ವದ ಬೀಜಗಳನ್ನು ಬಿತ್ತಿ; ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದರೆ ಭಕ್ತಿ ಎಂಬ ರಸ' ಎಂಬ ವಾತವರಣವನ್ನು ನಿರ್ಮಾಣ ಮಾಡಿ, ಬಸವ ಯುಗಕ್ಕೆ ನಾಂದಿ ಹಾಡಿದ ಜಂಗಮ ಜ್ಯೋತಿ.



No comments:

Post a Comment